2026ರ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟ – ವಿದ್ಯಾರ್ಥಿಗಳ ಕಾಯುವಿಕೆ ಅಂತ್ಯ!
ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಬಹುಕಾಲದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. 2026ರ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು, ಏಪ್ರಿಲ್ 9ರಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟವಾಗಲಿದೆ. ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಈ ವರ್ಷ ಸುಮಾರು 7 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ-1ಗೆ ಹಾಜರಾಗಿದ್ದಾರೆ. ಪರೀಕ್ಷೆ ಮುಗಿದ ದಿನದಿಂದಲೇ ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇಂದು ಮಹತ್ವದ ದಿನವಾಗಿದೆ. ಶಿಕ್ಷಣ ಇಲಾಖೆ ಫಲಿತಾಂಶ ಪ್ರಕಟಣೆಗೆ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಯಾವುದೇ ತಾಂತ್ರಿಕ ಸಮಸ್ಯೆ ಉಂಟಾಗದಂತೆ ಕ್ರಮಗಳನ್ನು ಕೈಗೊಂಡಿದೆ.
1.ಫಲಿತಾಂಶ ಪ್ರಕಟಣೆ ಸಮಯ ಮತ್ತು ಮಹತ್ವ
ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಫಲಿತಾಂಶ ಪ್ರಕಟವಾಗಲಿದ್ದು, ಅದೇ ಸಮಯದಲ್ಲಿ ಅಧಿಕೃತ ವೆಬ್ಸೈಟ್ಗಳಲ್ಲಿ ಲಭ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ಯೋಜನೆಗಳನ್ನು ಈ ಫಲಿತಾಂಶದ ಆಧಾರದ ಮೇಲೆ ನಿರ್ಧರಿಸಿಕೊಳ್ಳಲಿದ್ದಾರೆ. ಆದ್ದರಿಂದ ಈ ಫಲಿತಾಂಶವು ವಿದ್ಯಾರ್ಥಿಗಳ ಭವಿಷ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
2. ಫಲಿತಾಂಶ ನೋಡುವ ಸರಳ ವಿಧಾನ
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಆನ್ಲೈನ್ ಮೂಲಕ ಸುಲಭವಾಗಿ ವೀಕ್ಷಿಸಬಹುದು. ಇದಕ್ಕಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ವೆಬ್ಸೈಟ್ನಲ್ಲಿ ನಿಮ್ಮ Registration Number ನಮೂದಿಸಿದರೆ, ನಿಮ್ಮ ಅಂಕಪಟ್ಟಿ ತಕ್ಷಣವೇ ಪರದೆ ಮೇಲೆ ಕಾಣಿಸುತ್ತದೆ.
ಫಲಿತಾಂಶ ಪರಿಶೀಲಿಸಲು ಹಂತಗಳು:
- ಅಧಿಕೃತ ವೆಬ್ಸೈಟ್ ತೆರೆಯಿರಿ
- “karresults.nic.in” ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ
- Submit ಕ್ಲಿಕ್ ಮಾಡಿ
- ನಿಮ್ಮ ಅಂಕಪಟ್ಟಿ ಪರದೆ ಮೇಲೆ ಕಾಣುತ್ತದೆ
- ಅಗತ್ಯವಿದ್ದರೆ ಡೌನ್ಲೋಡ್ ಅಥವಾ ಪ್ರಿಂಟ್ ತೆಗೆದುಕೊಳ್ಳಿ
- ಸರ್ವರ್ನಲ್ಲಿ ಹೆಚ್ಚು ಟ್ರಾಫಿಕ್ ಇರುವ ಸಾಧ್ಯತೆ ಇರುವುದರಿಂದ ಕೆಲವೊಮ್ಮೆ ವೆಬ್ಸೈಟ್ ನಿಧಾನವಾಗಬಹುದು. ಆದ್ದರಿಂದ
- ವಿದ್ಯಾರ್ಥಿಗಳುತಾಳ್ಮೆಯಿಂದ ಪ್ರಯತ್ನಿಸುವುದು ಒಳಿತು.
3. SMS & Mobile App ಮೂಲಕ ಫಲಿತಾಂಶ
ಈ ಬಾರಿ ವಿದ್ಯಾರ್ಥಿಗಳಿಗೆ ಇನ್ನಷ್ಟು ಸುಲಭಗೊಳಿಸಲು SMS ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕವೂ ಫಲಿತಾಂಶ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಫಲಿತಾಂಶದ ಮಾಹಿತಿ ನೇರವಾಗಿ ಕಳುಹಿಸಲಾಗುತ್ತದೆ. ಜೊತೆಗೆ “Karnataka One” ಅಪ್ಲಿಕೇಶನ್ ಮೂಲಕವೂ ಫಲಿತಾಂಶವನ್ನು ಪರಿಶೀಲಿಸಬಹುದು.
4. DigiLocker ಮೂಲಕ ಡಿಜಿಟಲ್ ಅಂಕಪಟ್ಟಿ
ಈ ವರ್ಷದ ಪ್ರಮುಖ ವಿಶೇಷವೆಂದರೆ, DigiLocker ಮೂಲಕ ಡಿಜಿಟಲ್ ಅಂಕಪಟ್ಟಿ ಪಡೆಯುವ ಅವಕಾಶ. ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ DigiLocker ಖಾತೆಯಲ್ಲಿ ಲಾಗಿನ್ ಆಗಿ, ಕರ್ನಾಟಕ ಪಿಯು ಮಂಡಳಿಯನ್ನು ಆಯ್ಕೆ ಮಾಡಿ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಬಹುದು.
ಈ ಡಿಜಿಟಲ್ ಅಂಕಪಟ್ಟಿ ಭೌತಿಕ ಅಂಕಪಟ್ಟಿಯಷ್ಟೇ ಮಾನ್ಯತೆ ಹೊಂದಿದ್ದು, ಕಾಲೇಜು ಪ್ರವೇಶದ ವೇಳೆ ತಾತ್ಕಾಲಿಕ ದಾಖಲೆ ರೂಪದಲ್ಲಿ ಬಳಸಬಹುದು. ಮೂಲ ಅಂಕಪಟ್ಟಿ ಸಿಗುವವರೆಗೂ ಇದು ಉಪಯುಕ್ತವಾಗುತ್ತದೆ.
5.ವಿದ್ಯಾರ್ಥಿಗಳಿಗೆ ಸಲಹೆಗಳು
- ಫಲಿತಾಂಶ ನೋಡುವ ಮೊದಲು ನಿಮ್ಮ ಹಾಲ್ ಟಿಕೆಟ್ ರೆಡಿ ಇಟ್ಟುಕೊಳ್ಳಿ
- Registration Number ಸರಿಯಾಗಿ ನಮೂದಿಸಿ
- ವೆಬ್ಸೈಟ್ ಸ್ಲೋ ಇದ್ದರೆ ಮರುಪ್ರಯತ್ನ ಮಾಡಿ
- ಅಂಕಪಟ್ಟಿಯನ್ನು ಸೇವ್ ಮಾಡಿಕೊಳ್ಳಿ
6.ಫಲಿತಾಂಶದಲ್ಲಿ ಕಡಿಮೆ ಅಂಕ ಬಂದರೆ?
ಒಂದು ವೇಳೆ ನಿರೀಕ್ಷಿತ ಅಂಕಗಳು ಬರದಿದ್ದರೂ ಅಥವಾ ಅನುತ್ತೀರ್ಣರಾದರೂ ಆತಂಕಪಡುವ ಅಗತ್ಯವಿಲ್ಲ. ಶಿಕ್ಷಣ ಇಲಾಖೆ ಈಗಾಗಲೇ “ಪರೀಕ್ಷೆ-2” ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಇದರಿಂದ ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳಲು ಅವಕಾಶ ಸಿಗುತ್ತದೆ.
Website: karresults.nic.in